ಈಗಾಗಲೇ ಒಂದು ಕಡೆ ಬರಿತಿದಿನಿ ಮತ್ತೆ ಇನ್ನೊಂದು ಕಡೆ ಯಾಕೆ?
ಅದು ನನ್ನ ಮನೆ; ಇಲ್ಲಿ ಬರೆಯುವುದು ಸುಮ್ಮನೆ.
ಅಲ್ಲಿ ಎಲ್ಲರೂ ಬರಬಹುದು, ಬಂದು ಓದಬಹುದು. ಆದರೆ ಇಲ್ಲಿ ಎಲ್ಲರೂ ಬರಲ್ಲ, ಬಂದರೂ ಎಲ್ಲರೂ ಓದಲ್ಲ, ಇನ್ನು ಕೆಲವರಿಗೆ ಓದಬೇಕೆಂದರೂ ಓದಲಿಕ್ಕೆ ಬರಲ್ಲ. ಅದಕ್ಕೆ ಅದು ಅಲ್ಲಿ; ಇದು ಇಲ್ಲಿ.
ಏನಂತೀರಿ?
ಜೀವನದಲ್ಲಿ ನಾವು ಭೇಟಿ ಆಗುವ ಜನ ಹಲವಾರು. ಈವರೆಗಿನಿನ ಪ್ರಯಾಣದಲ್ಲಿ ಒಮ್ಮೆ ಹಾಗೆ ಹಿಂದುರಿಗಿ ನೋಡಿ!!
ಅಲ್ಲೆಲ್ಲ ತಮಾಷೆ, ನಗು, ಗೆಳೆಯರು, ಗೆಳೆತಿಯರು, ಓದು, ಸ್ಕೂಲು, ಕಾಲೇಜು, picnics, trips, ಪ್ರೀತಿ-ಪ್ರೇಮ, ಆ ಸಂತೋಷ- ದುಖ...
ಇದೆಲ್ಲವನ್ನು ದಾಟಿ ನಾವೆಲ್ಲರೂ ಈಗ corporate world ಗೆ ಮುಂದೆ ಸಾಗಿ ಬಂದಿದ್ದೇವೆ. ಇದೆಲ್ಲವನ್ನು ಹೊರತು ನಾನಲ್ಲ, ನೀವೂ ಅಲ್ಲ ಬಿಡಿ. ಯಾಕಂದ್ರೆ ನಾವು-ನೀವು ಮನುಷ್ಯರಲ್ಲವೇ?
ಏನೋ ದೊಡ್ಡದಾಗಿ ಪೀಟಿಕೆ ಹಾಕ್ತಾ ಇದಾನೆ ಅಂತ ಅನ್ಕೊಬೇದ್ರಿ. Start ಮಾಡೋಕಿಂತ ಮೊದಲು ಸ್ವಲ್ಪ flashback ಇದ್ರೆ ಚೆನ್ನಗಿತ್ತಲ್ವಾ?
ಹಾಗೇ ಕೆಲವೊಮ್ಮೆ ಏನೋ ಮಾಡ್ತಾ ಇರುವಾಗ ಈ ಮನಸ್ಸಿಗೆ ಎಲ್ಲೆಲ್ಲೋ ತಿರುಗೋಕೆ ಹೋಗೋ ಹಳೆ ಚಾಳಿ. (ಇವನಿಗೆ ಮಾಡೋಕೇನೂ ಕೆಲಸ ಇರಲ್ವಾ ಅಂತ ನಿಮ್ಮ ತೆಲೆಲಿ ಈಗ ಬಂದ್ರೆ ಅದು ನನ್ನ ತಪ್ಪಲ್ಲ ಬಿಡಿ). ಏನ್ ಮಾಡೋದು ಅದರ default setting ಹಾಗೇ ಇದೆ? ಹಾಗೇ ಕೆಲವೊಮ್ಮೆ ಹಿಂದೆ ಸ್ವಲ್ಪ rewind ರಾಗದಲ್ಲಿ ಹೋದಾಗ ಎಲ್ಲರೂ, ಎಲ್ಲಾನೂ ಹಿತವಾಗಿರುತ್ತೆ. ಅದು ಒಂದು ವ್ಯಕ್ತಿ ಆಗಿರಬಹುದು, ಘಟನೆ ಇರಬಹುದು, ಕಾಡುವ ಕಹಿ ನೆನೆಪಿರಬಹುದು, ಪ್ರವಾಸ ಮಾಡಿದ ಒಂದು ಊರು ಇರಬಹುದು, ಗೆಳೆಯರು ಕೂತು ನಕ್ಕು ಸಮಯ ಕಳೆದ ಜಾಗವಿರಬಹುದು, ಒಳ್ಳೆಯ ಸ್ನೇಹಿತನ ಥರ pose ಹೊಡೆದು ಈಗ address ಗೇ ಇರದ ಆ ಅಸಾಮಿ ಇರಬಹುದು, ನಿನ್ನಂಥ ಫ್ರೆಂಡ್ ನಾನು ಇಲ್ಲಿವರೆಗೂ ಭೇಟಿ ಆಗೇಇಲ್ಲ ಲೇ ಅಂತ ಒಂದು ಸಂಜೆ ಹೇಳಿದ ಆ ಗೆಳೆಯನ ನೆನಪಿರಬಹುದು, ಸುಮ್ಸುಮ್ನೆ ರಾತ್ರಿ ಎಲ್ಲ ಗೆಳೆಯರ ಜೊತೆ ಊರು ಸುತ್ತಿದ ನೆನಪಿರಬಹುದು, ವಿನಾಕಾರಣ ನಾನು ಕಣ್ಣೇರು ಹಾಕಿಸಿದ ಆ ಹುಡುಗಿ ಇರಬಹುದು, ಅವಳಿಗೊಂದು ಕ್ಷಮೆ ಕೇಳಲೆಂದು ಕಣ್ಣು ಅವಳನ್ನೇ ಹುಡುಕಿದ ಆ ದಿನಗಳು!! ಮೊದಲ ಸಾರಿ ಕೆಲಸಕ್ಕೆ ಸೇರಿದಾಗ ಪಟ್ಟ ಕಷ್ಟಗಳು, ಅವಮಾನಗಳು, ದುಡ್ಡು ಕಡಿಮೆ ಇದ್ದಾಗೆಲ್ಲ by-two ಟೀ ಕುಡಿತಿದ್ದ ಆ ದರ್ಶಿನಿ ಇರಬಹುದು, sudden
ಆಗಿ ನಮ್ಮೆಲ್ಲರ ಚಡ್ಡಿ ದೋಸ್ತ್ ರತ್ನಾಕರ್ accident ಅಲ್ಲಿ ಮರಣ ಹೊಂದಿದ ಆ ದಿನದ ನೆನಪು, ಕೆಲವೊಮ್ಮೆ ವಯಸ್ಸಾದವರನ್ನ ನೋಡಿದಾಗ ಈ ಎರೆಡು ತಿಂಗಳ ಹಿಂದೆ ತೀರಿಕೊಂಡ ನನ್ನ ಪ್ರೀತಿಯ ಅಜ್ಜನ ನೆನಪಾಗಿ ಕಣ್ಣಲ್ಲಿ ನೀರು ತುಂಬಿ ಬರೋದು.... ಇವೆಲ್ಲ ಕೆಲವೊಂದು ಸರ್ತಿ ನಾನು ಎಲ್ಲೇ ಇದ್ದರೂ - ನನಗೇ ಮುನ್ಸೂಚನೆ ಇಲ್ಲದೆ full fast ಆಗಿ rewind ಆಗಿರುತ್ತವೆ. ಯಾಕೆ ಅಂತ ಕೇಳಿದ್ರೆ ಉತ್ತರ - ಹಾಗೆ ಸುಮ್ಮನೆ!!!
ಕೆಲವೊಮ್ಮೆ ಇಷ್ಟೆಲ್ಲಾ ಹೇಗೆ ಕರಾರುವಕ್ಕಾಗಿ ನೆನಪಾಗುತ್ತಲ್ಲ ಅಂತ ನನಗೇ shock ಆಗುತ್ತೆ. ಈ ನೆನಪುಗಳು ಎಲ್ಲಿ ಇದ್ದವು, ಎಲ್ಲಿಂದ ಬಂದವು ಅಂದರೆ - ನನ್ನ ಮನದಂಗಳದಿಂದ, ನನ್ನ ನೆನಪಿನಗಳದಿಂದ !!
ನನಗೆ ತುಂಬಾನೇ ಹತ್ತಿರ ವಾದವುಗಳು ಪೋಣಿಸಿ ಬರೆದಿಡುವ ಜಗವೇ ಈ
http://nannanenapinangaladinda.blogspot.com/.
ವಿಶೇಷವಾಗಿ ನನ್ನ ಕವನಗಳು, ಹನಿಗವನಗಳು ಇಲ್ಲಿ ಆಗಾಗ ಬಂದು ಹೋಗುತ್ತವೆ. ಹೆಚ್ಚು ಕಡಿಮೆ 1997 ದಿಂದ ನಾನು ಅವನ್ನ ಬರೆದಿದ್ದೀನಿ. ಧಾರವಾಡ ಅನ್ನೋ ಊರೇ ಹಾಗೇ, ಅಲ್ಲೇ ಈ ಬರೆಯೋ ಚಾಳಿ ಶುರುಅಗಿದ್ದು. ಒಂದು ಕಾಲ ಇತ್ತು ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲು ಹೊಡೆದರೂ ಅದು ಒಬ್ಬ ಸಾಹಿತಿ ಮನೆ ಮೇಲೆ ಬೀಳುತ್ತೆ ಅಂತ ಮೊದಲೆಲ್ಲ ಮಾತಾಡ್ತಿದ್ರು (ಇವತ್ತು ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲು ಹೊಡೆದರೂ ಅದು ಒಂದು tution class ಮೇಲೆ ಬಿಳುತ್ತೆ). ನಾನು ಸಾಹಿತಿ ಅಂತೂ ಅಲ್ಲ ಅದ್ರುನು ಆ ಧಾರವಾಡದಲ್ಲಿ ಅದೇನೂ ಇದೆ - ನಮಗೆಲ್ಲ ಬರೆಯವುದನ್ನು ಕಲಿಸುತ್ತೆ. (ಅದೇ PUC exam ಅಲ್ಲಿ ಹೀಗೆ ಚೆನ್ನಾಗಿ ಬರಯೋದನ್ನ ಕಲಿಸಿದರೆ ಇವತ್ತು ಎಲ್ಲೋ ಇರ್ತಿದ್ದೆ ಬಿಡಿ) ಆಗೋದೆಲ್ಲ ಒಳ್ಳೇದಕ್ಕೆ ಅಂತ ಹೇಳ್ತಾರೆ!!
ಈ 4-5 ವರ್ಷಗಳಲ್ಲಿ ಈ ಕವನಗಳೆಲ್ಲ ಬರೆದಿದ್ದು ತುಂಬಾನೇ ಕಡಿಮೆ ನಾನು ಬರೆದಿರುದನ್ನೆಲ್ಲ ಓದಿ ನೀವು ಶಾಕ್ ಅಗ್ತಿರೂ, surprise ಅಗ್ತೀರೂ ಗೊತ್ತಿಲ್ಲ, ಆದ್ರೆ ನನಗೆ ಮಾತ್ರ ಇವನ್ನೆಲ್ಲ ನಿಮ್ಮ ಮುಂದೆ ಇಡೋಕೆ ಸಿಕ್ಕಾಪಟ್ಟೆ ಮುಜುಗರ ಭಯ ಆಗ್ತಿದೆ!!!
ಅದ್ರೂನು ಸ್ವಲ್ಪ ಧೈರ್ಯ ತಗೊಂಡಿದೀನಿ.
ನಿಮಗೆಲ್ಲ ಸ್ವಾಗತ ಸುಸ್ವಾಗತ!!
ಕೊನೆದಾಗಿ ಈ ಕಂಪ್ಯೂಟರ್ ನಲ್ಲಿ ಅದೂ ಕನ್ನಡದಲ್ಲಿ ಬರೆಯೋ ಸಾಫ್ಟ್ವೇರ್ ಕಂಡು ಹಿಡಿದ ಆ ಎಲ್ಲ ಪುಣ್ಯಾತ್ಮರಿಗೆ -ಪುಣ್ಯತಗಿತ್ತಿಯರಿಗೆ ನನ್ನ ಹೃದಯ ತುಂಬಿದ ಧನ್ಯವಾದಗಳು, ಯಾಕಂದ್ರೆ ನನ್ನ hand writing ಮೊದಲೇ ಸಿಕ್ಕ ಪಟ್ಟೆ ಖಾರಬು ಅದರಲ್ಲಿ ಕನ್ನಡವಂತೂ ಕಾಗೆ ಕಾಲು ಗುಬ್ಬೆ ಕಾಲು ಅಂತ ಚಿಕ್ಕವನಿದ್ದಾಗಿಂದ ಇನ್ನುವರೆಗೆ consistant ಆಗಿ compliment ಪಡೆದಿದ್ದೇನೆ!! ನಿಮಗೆ ಆ ಚಿಂತೆ ಇರಲ್ಲ :)
ನಾನು ಬರೆದಿರುವ postಗಳು ನಿಮಗೆ ಇಷ್ಟವಾದಲ್ಲಿ post ಕೆಳಗೆ ಇರುವ facebook "like" ಪ್ರೆಸ್ ಮಾಡಿ. ಅದು ನನಗೂ "like" ಆಗುತ್ತೆ!!
ನಿಮ್ಮಗ ಫ್ರೆಂಡ್ಸ್ ಇದನ್ನ ಓದಬೇಕು ಅಂತ ನಿಮಗೆ ಅನಿಸಿದರೆ "share on facebook" click ಮಾಡಿ share ಮಾಡಿ.
ನಾನು ಬರೆಯುವ ಹೊಸ post ಗಳು ನಿಮಗೆ ಗೊತ್ತಾಗಬೇಕಿದ್ರೆ "follow" click ಮಾಡಿ. ಏನೇ ಮಾಡಿ ಬಿಡಿ ಆದರೆ ನಿಮ್ಮ comments ಮಾತ್ರ ಬರೆಯೋದನ್ನ ಮಾತ್ರ ಬಿಡಬೇಡಿ.