Sunday, November 13, 2011

ಶಂಕರ್ ನಾಗ್ - ಒಂದು ನೆನಪು!!

ಶಂಕರ್ ನಾಗ್ ಹುಟ್ಟಿದ್ದು Nov 9 - 1954. ಊರು ಉತ್ತರ ಕನ್ನಡ ಜಿಲ್ಲೆಯ ಕುಮಟ ಹತ್ತಿರದ ಮಲ್ಲಾಪುರ್ ಎಂಬ ಊರು. ಕೆಲಸ ಮಾಡಲೆಂದು ಆಯ್ಕೆ ಮಾಡಿಕೊಂಡ ಊರು ಬಾಂಬೆ. ಅಲ್ಲಿ ತಮ್ಮ ಅಣ್ಣ ಅನಂತ್ ನಾಗ್ ಜೊತೆ ಇರುತ್ತಿದರು. ಅಣ್ಣನಂತೆ ನಾಟಕ ರಂಗ ಮತ್ತು ಬ್ಯಾಂಕ್ ಒಂದರಲ್ಲಿ ಕೆಲಸ  ಮಾಡುತ್ತಿದ್ದರು. ಅನಂತ್ ನಾಗ್ ತಮ್ಮ ನಟನಾ  ಕಲೆಯನ್ನು ಹಿಂದಿ ಚಿತ್ರೋದ್ಯಮದಲ್ಲಿ ಮೊದಲು ಬಾರಿಗೆ ಶ್ಯಾಮ್ ಬೆನೆಗಲ್ ಅವರ "ಅಂಕುರ್" ಚಿತ್ರದಲ್ಲಿ ತೋರಿಸಿದರು. ಅಲ್ಲಿಂದ ಶುರುವಾದ ಅವರ ಚಿತ್ರ ಜೀವನ - ಸುಮಾರು ಹಿಂದಿ ಚಿತ್ರಗಳಲ್ಲಿ ನಟಿಸಿದರು. ಅದರಲ್ಲಿ ಬಹುತೇಕ ಶ್ಯಾಮ್ ಬೆನೆಗಲ್ ಅವರ ಚಿತ್ರಗಳೇ. ನಂತರ ಅವರಿಗೆ ಕನ್ನಡ ಚಿತ್ರರಂಗದಿಂದ ಅವಕಾಶಗಳು ಒದಗಿ ಬಂದವು. ಬಹುಬೇಗ ಕನ್ನಡದಲ್ಲಿ ಯಶಸ್ವೀ ನಾಯಕರಾದರು. ಅನಂತ್ ನಾಗ್ ಮುಂಬೈ ಇಂದ  ಬೆಂಗಳೂರಿಗೆ ಬಂದು ನೆಲೆಸಿದರು. ಆಗ ತಮ್ಮ ಜೊತೆ ತನ್ನ ಪ್ರೀತಿಯ ತಮ್ಮನನ್ನು ಅವನ ಕೆಲಸ ಬಿಡಿಸಿ ಕರೆದುಕೊಂಡು ಬಂದರು. ಆಗಿನ ಕಾಲದಲ್ಲಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುವುದು ಎಂದರೆ ಹೆಮ್ಮೆಯ ವಿಷಯ. ಅದನ್ನು ಇಬ್ಬರೂ ಬಿಟ್ಟು ಬೆಂಗಳೂರಿಗೆ ಬಂದರು!!  

ಅವರು ಚಲನಚಿತ್ರ ರಂಗಕ್ಕೆ ನಟನಾಗಿ ಬಂದಿದ್ದು ಆಕಸ್ಮಿಕ. ಶಂಕರ್  ನಾಗ್ ಅವರಿಗೆ ನಾಯಕ ನಟ ನಾಗಿಸಲು ಅವರ ಅಣ್ಣ ಅನಂತ್ ನಾಗ್ ಮುಂಬೈ ಇಂದ ಕರೆ ತಂದಿದ್ದರು, ಆದರೆ ಚಿತ್ರ ನಿರ್ದೇಶಕನಾಗುವ ಬಯಕೆ ಇಂದ ಅವರು ಬಾಂಬೆ ಯಲ್ಲಿ ಮಾಡುತ್ತಿದ್ದ ಬ್ಯಾಂಕ್ ಕೆಲಸವನ್ನು ಬಿಟ್ಟು ಬಂದಿದ್ದು!! ಹಾಗಾಗಿ ಅವರು ಹೆಚ್ಚ್ ಹೆಚ್ಚು ನಿರ್ದೇಶಕರ ಜೊತೆ ಒಡನಾಟ ಇಟ್ಟುಕೊಂಡಿದ್ದರು.  ಗಿರೀಶ್ ಕಾರ್ನಾಡ್ ಅವರು ನಿರ್ದೇಶನ ಮಾಡುತ್ತಿದ್ದ ಹೊಸ ಚಿತ್ರಕ್ಕೆ ನವಯುವಕನನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಕಂಡಿದ್ದು ತಮ್ಮ ಹತ್ತಿರವೇ ಪಾದರಸದಂತೆ  ಚುರುಕಾಗಿ ಓಡಾಡಿಕೊಂಡಿದ್ದ  ಶಂಕರ!! ಅವನಿಗೆ ಹೇಳಿಯೂ ಬಿಟ್ಟರು ಹೊಸ ಚಿತ್ರಕ್ಕೆ ನೀನೆ ನಾಯಕ, ಮಾಡು ಅಂತ. ಆದರೆ ಶಂಕರ ಒಪ್ಪಲ್ಲಿಲ್ಲ  ಬದಲಿಗೆ "ನಾನು ನಿಮಗೆ ಸಹಾಯಕ ನಿರ್ದೇಶಕ ನಾಗುತ್ತೇನೆ - ಆದರೆ ನಟಿಸಲು ನಾನೊಲ್ಲೆ". ಕೊನೆಗೆ ಹಾಗೂ ಹೀಗೂ ಕಾಡಿ ಬೇಡಿ ಶಂಕರ ನನ್ನು ಒಪ್ಪಿಸಿದರು. ಆ ಚಲನ ಚಿತ್ರದ ಹೆಸರು " ಒಂದಾನೊಂದು ಕಾಲದಲ್ಲಿ"!!


ಈ ಚಿತ್ರವು  ದಾಂಡೇಲಿ ಮತ್ತು ಬೆಳಗಾವಿ ಹತ್ತಿರದ ತುರಮುರಿ ಮತ್ತು ಹುನಸಿಕಟ್ಟಿ ಎಂಬ ಗ್ರಾಮದಲ್ಲಿ ಚಿತ್ರೀಕರಣ ಗೊಂಡಿದ್ದು. ವಿಶೇಷವೆಂದರೆ ಈ ಚಿತ್ರದಲ್ಲಿರುವ  ಗೌಡರ ವಾಡೆಯನ್ನು ತುಂಬಾ ಚೆನ್ನಾಗಿ ಚಿತ್ರೀಕರಿಸಿದ್ದರೆ. ಅದನ್ನು ಇಂದಿಗೂ ತುರಮುರಿ ಯಲ್ಲಿ ನೋಡಬಹುದು.




ತಾನು ಅಳಕುತ್ತ ಒಪ್ಪಿ ನಟಿಸಿದ ಚಿತ್ರಕ್ಕೆ ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ ಮತ್ತು ಗೌರವ ತಂದು ಕೊಟ್ಟಿತು. ಬಂಡಾಯ ಕಥೆಯಾದ ಈ ಚಿತ್ರದಲ್ಲಿ 24 ರ ಹರೆಯ ಶಂಕರ್ ನಾಗ್ ಲೀಲಾಜಾಲವಾಗಿ ನಟಿಸಿದರು. ನಮ್ಮನ್ನೆಲ್ಲ 36 ನೆ ವಯಸ್ಸಿಗೆ ಅಗಲುವ ಮುನ್ನ ಶಂಕರ್ ನಾಗ್ 72 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾಲ್ಗುಡಿ ಡೇಸ್, ಮಿಂಚಿನ ಓಟ, ಆಕ್ಸಿಡೆಂಟ್ ದಂಥ ಅದ್ಭುತ ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ತೋರಿಸಿದ್ದಾರೆ. ಬಹಳಷ್ಟು ಜನರಿಗೆ ಗೊತ್ತಿಲ್ಲ ಡಾ.ವಿಷ್ಣುವರ್ಧನ ಅವರು ಮಾಲ್ಗುಡಿ ಡೇಸ್ ನಲ್ಲಿ ಅಬಿನಯಿಸಿದ್ದಾರೆ!! ಹಾಗೂ ಡಾ.ರಾಜಕುಮಾರ್ ಅವರ ಅಭಿನಯದ ೨೦೦ ನೇ  ಚಿತ್ರವಾದ "ಒಂದು ಮುತ್ತಿನ ಕಥೆ" ನಿರ್ದೇಶನ ಮಾಡಿದ್ದೂ ಶಂಕರ್ ನಾಗ್ ಅವರು.  ಅಂಥ ಹಿರಿಯರೂ ಶಂಕರ್ ನಾಗ್ ಮೇಲೆ ಅಷ್ಟೊಂದು ನಂಬಿಕೆ ಹೊಂದಿದ್ದರು.    

ಈ ಮುಖಾಂತರ ನಿಮಗೆಲ್ಲ ಶಂಕರ್ ನಾಗ್ ಅವರ ಪ್ರಥಮ ಚಿತ್ರ "ಒಂದಾನೊಂದು ಕಾಲದಲ್ಲಿ" ಕೆಲವು ಚಿತ್ರಗಳನ್ನು ಒಟ್ಟಿಗೆ ಇಲ್ಲಿ ಇಡುತ್ತಿದ್ದೇನೆ.

ಕೊನೆಯ ಮಾತು: ಪ್ರತಿಯೊಬ್ಬ ಕನ್ನಡಿಗರು ತಮ್ಮ ಜೀವನದಲ್ಲಿ ಒಂದಿಲ್ಲ ಒಂದು ಸಾರಿ ಅಂದುಕೊಂಡಿರುತ್ತಾರೆ  "ಇವತ್ತು ಶಂಕರ್ ನಾಗ್ ಇದ್ದಿದ್ದರೆ ನಮ್ಮ ಕನ್ನಡ ಚಿತ್ರರಂಗ ಇಂದು ಪೂರ್ತಿ ಬೇರೆಥರಾನೇ ಇರುತ್ತಿತ್ತು"!!




















ಇಂತಹ ಮಹಾನ್ ನಿರ್ದೇಶಕ, ನಟ ಈಗ ನಮ್ಮ ನಿಮ್ಮ ನೆನಪು ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ತೋರಿಸಬಹುದಾದ ಒಂದು ಚೇತನ!!

ಇಂತಿ ನಿಮ್ಮ
ರಾಜು   
 

Friday, March 4, 2011

ಪ್ರೀತಿಯ ಪಾರಿವಾಳ

ಇದು ಸುಮಾರು ಒಂದು ವರ್ಷ ಹಿಂದಿನ ಮಾತು. ನನ್ನ ಆಪ್ತಮಿತ್ರ ಶಶಿಧರ್ - ಮೂಡಲಗಿ ಇಂದ ಬೆಂಗಳೂರಿಗೆ ಬಂದಿದ್ದ. ಅಂದು ಸಂಜೆ ನನ್ನ ಕಾರಲ್ಲಿ ಹೊರಗಡೆ ಎಲ್ಲೋ ಸುತ್ತುತಿರುವಾಗ  ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಒಂದು ಹಾಡು ತುಂಬಾ famous ಆಗಿದೆ ಕೇಳು ಅಂದ. ಅದ್ಯಾವುದೋ ಅಂತ ನಾನು ಕೇಳಿದಕ್ಕೆ ಅದರ ಹೆಸರು "ಪ್ರೀತಿಯ ಪಾರಿವಾಳ " ಅಂದ. ನನಗೋ ನಗು ತಡೆಯಲು ಆಗಲಿಲ್ಲ - ಯಾವ ಪಾರಿವಾಳ ಬಗ್ಗೆ ಮತದಾಕತ್ತಿ ಅಂತ ಅವನನ್ನ ರೇಗಿಸೋಕೆ ಶುರು ಮಾಡಿದೆ. ಲೇ ಮೊದಲು ಇದನ್ನ ಕೇಳು ಆಮೇಲೆ ಮಾತಾಡು ಅಂತ mobile ತಗೆದು ಹಾಡು ಶುರು ಮಡಿದ.

 
ಮೊದಲ ಎರೆಡು ಸಾಲು ಕೇಳಿದಾಗ ನಾನು ನಕ್ಕಿದ್ದೇ ನಕ್ಕಿದ್ದು . ಅದಕ್ಕವನು " ಲೇ ಮೊದಲು ಪೂರ್ತಿ ಕೇಳು ಆಮೇಲೆ ನಗುವಂತೆ"ಅಂದ. ಆ ಹಾಡು ಕೇಳ್ತಾ ಕೇಳ್ತಾ ನನಗೆ ಇಷ್ಟ ಆಯಿತು, ಅದರ lyrics ಬೇರೆ ಹಾಡಿಗಿಂತ ಬೇರೆ ಇದಾವೆ, ಈ ಹಾಡಲ್ಲಿ 
ಒಂದು ನೋವು ಇದೆ ಅಂತನೂ ಹೇಳಬಹುದು. ಹಾಡು ಪೂರ್ತಿ ಕೇಳಿದಮೇಲೆ -ಚೊಲೋ ಐತಿ ನಂಗ transfer ಮಾಡು ಅಂತ ಹೇಳಿ ನನ್ನ mobile ಗೆ transfer ಮಾಡಿಕೊಂಡೆ. ಆಮೇಲೆ ಕೆಲವು ತಿಂಗಳ ನಂತರ ನನ್ನ ಇತರ ಉತ್ತರ ಕರ್ನಾಟಕದ ಗೆಳೆಯರಿಗೆ ಅದನ್ನ ಮೇಲ್ ಮಾಡಿದೆ. ಎಲ್ಲರಿಗೂ ಅದು ಇಷ್ಟ ಆಯಿತು. ನಮ್ಮೊರ ಕಡೆಯ ಒಂದು ಜಾನಪದ ಹಾಡು ಇಷ್ಟು ಚೆನ್ನಾಗಿದೆ ಅಲ್ಲ ಎಲ್ಲಿ ಸಿಕ್ಕಿತೋ ಇದು?  ಅಂತ ಎಲ್ಲರು ನನ್ನ ಕೇಳಿದ್ದೇ ಕೇಳಿದ್ದು. 

ಸ್ವಲ್ಪ ದಿನಗಳ ನಂತರ ಗೂಗಲ್ ಅಲ್ಲಿ ಪ್ರೀತಿಯ ಪಾರಿವಾಳ ಅಂತ ಟೈಪ್ ಮಾಡಿದೆ. To my surprise ಅದರ video ಸಿಕ್ಕಿತು. ಹಗೆ ಅದನ್ನ ನನ್ನ ಇನ್ನೊದು ಬ್ಲಾಗ್ rajuhiremath.blogspot.com ಗೆ upload ಮಾಡಿದೆ ಒಂದು ಚಿಕ್ಕ ಬ್ಲಾಗ್ ಬರೆದೆ. 

ಈಗ ಅದನ್ನೇ ಸುಮಾರು ೬ ತಿಂಗಳ ನಂತರ ನನ್ನ ಕನ್ನಡ ಬ್ಲಾಗ್ಗೆ ಅಪ್ಲೋಡ್ ಮಾಡ್ತಾ ಇದೀನಿ. ನಾಳೆ ಮತ್ತೆ ಶಶಿ ಬೆಂಗಳೂರಿಗೆ ಬರುತ್ತಿದ್ದಾನೆ, ನೋಡೋಣ ಈ ಸರತಿ ಯಾವ ಹಾಡು ತೊಗೊಂಡು ಬರುತ್ತಾನೆ...

ಅಲ್ಲಿಯವರೆಗೆ  ಕೇಳಿ ಆನಂದಿಸಿ!!  




ನಿಮ್ಮ
ರಾಜು

Friday, February 11, 2011

ನಾಕು ತಂತಿ



ಈ ಸಾಲುಗಳನ್ನು ಓದಿದಾಗೆಲ್ಲ ನನಗೆ ಮರಳಿ ಊರಿಗೆ ಹೋಗಬೇಕು ಅನಿಸೋದು. ಮರಳಿ ನಮ್ಮ ಮಣ್ಣಿಗೆ ಹೋಗೋದರಲ್ಲಿಯೇ ಸುಖವಿದೆ ಅಂತ ಓದಿದ ಯಾರಿಗೂ ಒಮ್ಮೆ ಅನಿಸದೇ ಇರದು.  ಅಷ್ಟು ಚೆನ್ನಾಗಿ ದ. ರಾ. ಬೇಂದ್ರೆ ಅವರು ಬರೆದಿದ್ದಾರೆ. ಅವರ ಕವನ ಸಂಕಲನ "ನಾಕು ತಂತಿ" ಯಲ್ಲಿ ಬರೆದಿದ್ದು, ನೀವೂ ಒಮ್ಮೆ ಓದಿ ನೋಡಿ


ನಾಕು ತಂತಿ

ಬಾರೋ ಸಾಧನಕೇರಿಗೆ
ಮರಳಿ ನಿನ್ನೀ ಊರಿಗೆ
ಮಳೆಯು ಎಳೆಯುವ ತೇರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣಕೊಂದು ಬಿದ್ದಿದೆ,
ನೋಟ ಸೇರದು ಯಾರಿಗೆ
ಬಾರೋ ನಿನ್ನೀ ಊರಿಗೆ
ಮರಳಿ ಸಾಧನಕೇರಿಗೆ....
- ದ ರಾ ಬೇಂದ್ರೆ

ಸ್ಥಳ ಪರಿಚಯ:- ಸಾಧನಕೇರಿ ಅನ್ನೋದು ಧಾರವಾಡದಲ್ಲಿ ಅವರು ಇದ್ದ ಸ್ಥಳದ ಹೆಸರು, ಜೊತೆಗೆ ಅಲ್ಲೊಂದು ಸುಂದರ ಕೆರೆಯೂ ಇದೆ. ದ ರಾ ಬೇಂದ್ರೆ ಯವರು ಹೆಚ್ಚಾಗಿ ಅಲ್ಲೇ ಕುಳಿತು ಕೆಲವು ಕವನಗಳನ್ನ ಬರೆದಿದ್ದಾರೆ. ಈಗ ಅಲ್ಲೊಂದು ಸುಂದರ ಸ್ಮಾರಕವನ್ನು ಮಾಡಿದ್ದರೆ. ಧಾರವಾಡ ಕಡೆಗೆ ಬಂದಾಗ ಒಮ್ಮೆ ನೋಡಿ ಬನ್ನಿ  

Thursday, February 10, 2011

ಹೆಣ್ಣು ಮಕ್ಕಳು

Written on 05-05-1999

ಹೆಣ್ಣು  ಮಕ್ಕಳು

ಚಿಕ್ಕವರಿದ್ದಾಗ - ನೀರಿಗಾಗಿ ಜಗಳಾಡುವರು
ನೀರು ತಂದೇ ತರುವೆನು ಎಂದು.
ದೊಡ್ಡವರಾದಾಗ - ನೀರಿಗಾಗಿ ಜಗಳಾಡುವರು
ನೀರು ತರಲು ನಾನೊಲ್ಲೆ ಎಂದು.




ವಸಂತ ಋತು

 Written on 29/01/1999                                                    


                                               ವಸಂತ ಋತು 

ಬಂದಿದೆ, ಮತ್ತೆ ಬಂದಿದೆ
ವಸಂತ ಋತು ಮತ್ತೆ ಬಂದಿದೆ.
ಯುಗ ಯುಗ ಕಳೆದರೂ ಯುಗಾದಿ ಬರುವಂತೆ
ಋತು ಋತು ಉರುಳಿದರೂ ಮತ್ತೆ ವಸಂತ ಋತು ಬಂದಿದೆ.


ಅಳುಮುಂಜಿಯಂತೆ ಮುಖ ಮಾಡಿದ್ದ ಎಲೆಗಳೆಲ್ಲ
ಈ ಋತುವಿನಲ್ಲಿ ಹೊಸ  ಉಲ್ಲಸವ ತೋರುತಿವೆ.
ಬಂಜೆಯಂತಿದ್ದ ಗಿಡ ಮರಗಳೆಲ್ಲ ಹಣ್ಣುಕಾಯಿ ಬಿಡಲು
ಹೂಬಿಟ್ಟು ಬಸುರಿಯಂತೆ ತಾಯ್ತನ ತೋರುತಿವೆ.


ಎಲ್ಲ ಋತುಗಳಲ್ಲಿ ತನ್ನ ಹಾಡನ್ನು ಅದುಮಿಟ್ಟ ಕೋಗಿಲೆ
ಇದೆ ಋತುವಿನಲ್ಲಿ ಸಹನೆಯೊಡೆದು "ಕುಹೂ ಕುಹೂ" ಎನ್ನುತಿದೆ.


ವಿರಹದ ಬೆಂಕಿಯಲಿ ಬೇಯುತಿರುವ ಪ್ರಿಯತಮೆ
ಈ ಋತುವಿನ ಮುಂಜಾವ ತಂಪಿನಲಿ ಇನಿಯನ ನೆನೆಯುತ
ಆತನ ಸೇರಲು ಕನವರಿಸುತಿಹಳು.


ಉಲ್ಲಾಸ, ಈ ಋತುವಿನಲ್ಲಿ ಎಲ್ಲೆಲ್ಲಿ ನೋಡಿದರೂ ನವೋಲ್ಲಾಸ
ಗಿಡಮರಗಳ ಹೂಎಲೆಗಳಲ್ಲಿ,
ಕೋಗಿಲೆಯ ಹಾಡಲ್ಲಿ,
ಪ್ರೇಮಿಗಳ ಮಿಲನದಲ್ಲಿ..... ನವೋಲ್ಲಾಸ.


ನೋಡಿದಲ್ಲೆಲ್ಲ ಉಲ್ಲಾಸ
ಕೆಳಿದಲ್ಲೆಲ್ಲ ಒಂದಾದ ಸಂಕೇತವೆಂಬಂತೆ ಋತುಗನಗಳು!!!




ನಿಮ್ಮ
ರವಿ