ಈ ಸಾಲುಗಳನ್ನು ಓದಿದಾಗೆಲ್ಲ ನನಗೆ ಮರಳಿ ಊರಿಗೆ ಹೋಗಬೇಕು ಅನಿಸೋದು. ಮರಳಿ ನಮ್ಮ ಮಣ್ಣಿಗೆ ಹೋಗೋದರಲ್ಲಿಯೇ ಸುಖವಿದೆ ಅಂತ ಓದಿದ ಯಾರಿಗೂ ಒಮ್ಮೆ ಅನಿಸದೇ ಇರದು. ಅಷ್ಟು ಚೆನ್ನಾಗಿ ದ. ರಾ. ಬೇಂದ್ರೆ ಅವರು ಬರೆದಿದ್ದಾರೆ. ಅವರ ಕವನ ಸಂಕಲನ "ನಾಕು ತಂತಿ" ಯಲ್ಲಿ ಬರೆದಿದ್ದು, ನೀವೂ ಒಮ್ಮೆ ಓದಿ ನೋಡಿ
ನಾಕು ತಂತಿ
ಬಾರೋ ಸಾಧನಕೇರಿಗೆ
ಮರಳಿ ನಿನ್ನೀ ಊರಿಗೆ
ಮಳೆಯು ಎಳೆಯುವ ತೇರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣಕೊಂದು ಬಿದ್ದಿದೆ,
ನೋಟ ಸೇರದು ಯಾರಿಗೆ
ಬಾರೋ ನಿನ್ನೀ ಊರಿಗೆ
ಮರಳಿ ಸಾಧನಕೇರಿಗೆ....
- ದ ರಾ ಬೇಂದ್ರೆ
ಸ್ಥಳ ಪರಿಚಯ:- ಸಾಧನಕೇರಿ ಅನ್ನೋದು ಧಾರವಾಡದಲ್ಲಿ ಅವರು ಇದ್ದ ಸ್ಥಳದ ಹೆಸರು, ಜೊತೆಗೆ ಅಲ್ಲೊಂದು ಸುಂದರ ಕೆರೆಯೂ ಇದೆ. ದ ರಾ ಬೇಂದ್ರೆ ಯವರು ಹೆಚ್ಚಾಗಿ ಅಲ್ಲೇ ಕುಳಿತು ಕೆಲವು ಕವನಗಳನ್ನ ಬರೆದಿದ್ದಾರೆ. ಈಗ ಅಲ್ಲೊಂದು ಸುಂದರ ಸ್ಮಾರಕವನ್ನು ಮಾಡಿದ್ದರೆ. ಧಾರವಾಡ ಕಡೆಗೆ ಬಂದಾಗ ಒಮ್ಮೆ ನೋಡಿ ಬನ್ನಿ

No comments:
Post a Comment