Friday, November 19, 2010

Shankar Nag: ಅವರ ಕೊನೆಯ ಮಾತುಗಳು..

ನಾವು ನೀವು ಚಿಕ್ಕವರಿದ್ದಾಗ "ಮಾಲ್ಗುಡಿ ಡೇಸ್" ಎಂಬ ಧಾರವಾಹಿ ನೋಡ್ತಾ ಇದ್ವಿ. ಆದನ್ನ ನೋಡಿ ಇವಾಗ ತುಂಬಾ ವರ್ಷಗಳು ಆಗಿವೆ. ಇವತ್ತು ನಾವು ನೀವು ಬೆಳೆದು ದೊಡ್ದವರಗಿದ್ದಿವಿ, ನಮ್ಮಲ್ಲಿ ಕೆಲವರಿಗೆ ಮಕ್ಕಳೂ ಅಗಿದಾವೆ, ಆ ಮಕ್ಕಳೂ ಬೆಳೆದು ದೊಡ್ಡವರಾಗಿದ್ದಾರೆ. ನಾವೆಲ್ಲ ಶಂಕರ್ ನಾಗ್ ಅವರ ಚಿತ್ರ ಗಳನ್ನ ನೋಡಿದ್ದೇವೆ ಅಲ್ವಾ.  ಇವತ್ತು ನಮ್ಮ ಕರ್ನಾಟಕ ಬಿಟ್ಟು ಈ ದೇಶದಲ್ಲಿ ಯಾವುದೇ ಊರಿಗೆ ಹೋಗಿ ಅಲ್ಲಿ ಜನರ ಮುಂದೆ "ಮಾಲ್ಗುಡಿ ಡೇಸ್" ಅಂದ್ರೆ ಸಾಕು ಎಲ್ಲರ ತೆಲೇಲಿ " ತಂದಾನ ತಾನ ನಾ ನಾ ನಾ..." ಅನ್ನೋ ರಾಗ ಬರದೆ ಇರೋಲ್ಲ. ಆ ಒಂದು ಒಳ್ಳೆಯ ಧಾರವಾಹಿ ಕೊಟ್ಟಿದ್ದು ನಮ್ಮವರೆ ಆದ ಶಂಕರ್ ನಾಗ್ ಅಂತ ಹೇಳಿಕೊಳ್ಳೋಕೆ ಖುಷಿ ಆಗುತ್ತೆ ಹಾಗೇ ಇವತ್ತು ಅವರು ಇದ್ದಿದ್ದರೆ ಎಷ್ಟು ಒಳ್ಳೇದು ಅಲ್ವಾ!! ಅಂತ ದುಖ:ನೂ ಆಗುತ್ತೆ.


ಆ ದಿನ ನನಗೆ ಇನ್ನೂ ನೆನಪಿದೆ. ರೇಡಿಯೋ ದಲ್ಲಿ ಅವರ ಅಪಘಾತ ಆಗಿರೋ ಸುದ್ದಿ ಕೇಳಿದಾಗ, ಸ್ಕೂಲ್ ಅಲ್ಲಿ ಎಲ್ಲರೂ ಅದನ್ನೇ ಮಾತಾಡುವಾಗ ಅಮ್ಮನ ಹತ್ರ ಹೋಗಿ ಕೇಳಿದ್ದೆ ಶಂಕರ್ ನಾಗ್ ನಿಜವಾಗಲು ತೀರಿಕೊಂದ್ರಾ? ಅದ್ದಕ್ಕೆ ಅಮ್ಮ "ಇಲ್ಲ ವೀರಪ್ಪನ್ kidnap ಮಾಡಿದಾನೆ, ಬೇಗ ಬಿಡುಗಡೆ ಮಾಡ್ತಾನೆ". ಅಮ್ಮ ಹಾಗೇ ಹೇಳಿದ ಮೇಲೆ ಸಮಾಧಾನ ಆಯಿತು. ಹಾಗೇ ಶಂಕರ್ ನಾಗ್ ಹೀರೋ ಥರ ವಾಪಾಸ್ ಬರ್ತಾರೆ ಅಂತ hopes ಬಂತು. ಆದರೆ ಮಾರನೆ ದಿನ ಸ್ಕೂಲ್ ಗೆ  ಹೋದಾಗ ನಿಜವಾಗ್ಲೂ ಸತ್ರು ಅಂತ ಸ್ಕೂಲ್ ತುಂಬಾ ಸುದ್ದಿ ಆಗಿತ್ತು. ಹಾಗಾದ್ರೆ ಇನ್ನು ಶಂಕರ್ ನಾಗ್ ವಾಪಾಸ್ ಬರಲ್ಲ ಅಂತ ಅವತ್ತು ಖಾತ್ರಿ ಆಯಿತು ಹಾಗೇ ಬೇಜಾರೂ ಆಯಿತು. ಆ ದಿನ ನಾನೊಬ್ಬನೇ ಅಲ್ಲ ಇಡೀ ಕರ್ನಾಟಕ ಜನ ನನ್ನಥರಾನೆ hopes ಕಳಕೊಂಡರು. ಆ ದಿನ ಮತ್ತೆ ಅಮ್ಮನ ಹತ್ರ ಹೋಗಿ "ಯಾಕೆ ಶಂಕರ್ ನಾಗ್ ಗೆ ಇನ್ನು ವಯಸ್ಸು ಆಗಿರಲಿಲ್ಲ, ಮತ್ಯಾಕೆ ಬೇಗ ಸತ್ರು?" ಅಂತ ಕೇಳಿದ್ದೆ. ಅದಕ್ಕೆ ಅಮ್ಮ "ಆ ದೇವರಿಗೆ ಯಾರು ತುಂಬಾ ಇಷ್ಟನೋ ಅವರನ್ನ ಬೇಗ ಕರಕೊಂಡು ಹೋಗ್ತಾನೆ" ಅಂತ ಹೇಳಿದರು. "ಆ ದೇವರು ಹೀಗೆ ಯಾಕೆ ಮಾಡ್ತಾನೆ?" ಅಂತ ಕೇಳಿದ್ದೆ. ಅಮ್ಮನ ಹತ್ರ ಉತ್ತರ ಇರಲಿಲ್ಲ....

ಈ ದಿನ ನಾವು ಕರ್ನಾಟಕದ ಯಾವ ಊರಿಗೆ ಹೋದರೂ ಆ ಊರಲ್ಲಿ atleast ಒಂದು ಅದರೂ ಆಟೋ ಮೇಲೆ ಶಂಕರ್ ನಾಗ್ ಪೇಂಟಿಂಗ್ ಇರದೇ ಇರಲ್ಲ. ಬರೀ ಆಟೋ ದವರು ಅಂತ ಅಲ್ಲ, ಇನ್ನೂ ಜನ ಶಂಕರ್  ನಾಗ್ ಅಂದ್ರೆ ಆ ಪ್ರೀತಿ ಹಾಗೇ ತಮ್ಮ ಹೃದಯಲ್ಲಿ ಹಾಗೇ ಬೆಚ್ಚಗೆ ಇಟ್ಟು ಕೊಂಡಿದ್ದಾರೆ, ಹಾಗೇ ಅವರ ಬಗ್ಗೆ ಹೆಮ್ಮ, ಅಭಿಮಾನ ಕೂಡ. ಇಷ್ಟೊಂದು ಪ್ರೀತಿನ ಅಷ್ಟು ಚಿಕ್ಕ ವಯಸ್ಸಲ್ಲಿ ಪಡೆದಿರೋದು ಅಂದ್ರೆ ಶಂಕರ್ ನಾಗ್ ಮಾತ್ರ!! ಅಷ್ಟು ಚಿಕ್ಕ ವಯಸಲ್ಲಿ ಅವರು ಮಾಡಿರೂ ಸಾಧನೆ ಕೂಡ ಅದ್ಭುತ. ಇವತ್ತು ಅವರು ಇದ್ದಿದ್ದರೆ ಪಕ್ಕಾ ಅಂತರ್ ರಾಷ್ಟೀಯ  ಮಟ್ಟಕೆಲ್ಲ ಒಳ್ಳೆ ಹೆಸರು ಮಾಡ್ತಿದ್ರು. ನನಗೇ ಕೆಲವೊಮ್ಮೆ ಅನಿಸೋದು : ಶಂಕರ್ ನಾಗ್, ರಾಜಕುಮಾರ್, ವಿಷ್ಣುವರ್ಧನ್ ಇವರೆಲ್ಲ ಇವತ್ತಿನ ಜಮಾನ ದಲ್ಲಿ film industry enter ಆಗಬೇಕಿತ್ತು, ಆಗ ನಮ್ಮ ಕನ್ನಡ film industry ನಾ ಹಿಡಿಯೋರೆ ಇರ್ತಿರಲಿಲ್ಲ. ಹಂಗೆ ಎದೆ ಉಬ್ಬಿಸಿಕೊಂಡು ಮೆರಿತಿದ್ವಿ.  ಆದರೆ ಆ ದೇವರು ಹಾಗೇ ಅಲ್ವಾ, ನಮಗೆ ಗೊತ್ತಾಗದ ಹಾಗೇ ಸ್ವಲ್ಪ ಸ್ವಲ್ಪ ಕೊಡ್ತಾನೆ ಹಾಗೇ ಸ್ವಲ್ಪ ಸ್ವಲ್ಪ ತೊಗೊಂಡು ಬಿಡ್ತಾನೆ. ನಂತರ ನಮ್ಮ ಜೊತೆ ಇರೋದು ಬರಿ ಆ ನೆನಪುಗಳು ಮಾತ್ರ!! ಇವತ್ತು ನಮ್ಮ ಮಕ್ಕಳಿಗೆ, ನಮ್ಮ ಕಾಲದಲ್ಲಿ  ಇವರೆಲ್ಲ ಹೀಗಿದ್ದರು ಹಾಗಿದ್ದರು ಅಂತ ನಾವು ನೀವು ಹೇಳಿ ಸಮಾಧಾನ ಮಾಡ್ಕೊಬೇಕು ಅಷ್ಟೇ!!     






  
ಶಂಕರ್ ನಾಗ್ ಅವರು ಏನೇನು ಮಾಡಿದಾರೆ ಅಂತ ಹೇಳೋವಷ್ಟು ದೊಡ್ಡ ಮನುಷ್ಯ ನಾನಲ್ಲ. "ಮಾಲ್ಗುಡಿ ಡೇಸ್" ಅವರು ಮಾಡಿರೋ ಒಂದು ಧಾರವಾಹಿ ಉದಾಹರಣೆ ಕೊಟ್ಟೆ ಅಷ್ಟೇ. ಈ ಎರೆಡು ವಾರಗಳ ಹಿಂದೆ ಅವರ ಒಂದು ಮಾತು ಕಥೆ ನೋಡಿದೆ. ಆ ದಿನಗಳಲ್ಲಿ "ವಿವಿಧಭಾರತಿ" ರೇಡಿಯೋ station ನಲ್ಲಿ ಅವರು 30 ನಿಮಿಷ ಒಂದು  interview ಕೊಟ್ಟಿದ್ದರು ಆದನ್ನ ಎಲ್ಲರಿಗೂ ಹಂಚಿಕೊಬೇಕು ಅನಿಸ್ತು. ಅವರ ಮಾತುಗಳು ಕೇಳ್ತಾ ಇದ್ರೆ ಅವರು ನಮ್ಮ ಜೊತೇನೆ ಇದಾರೆ ಅನಿಸುತ್ತೆ, ಹಾಗೇ ಗೊತ್ತಿಲ್ಲದೇ ಮನಸು ಭಾರ ಆಗುತ್ತೆ. ಇದನ್ನೆಲ್ಲಾ  ಸುಮ್ಮನೆ FB ಅಲ್ಲಿ share ಮಾಡಿ ಎರೆಡು ನನ್ನ profileನಲ್ಲಿ  ಇದ್ದು ಮರೆ ಆಗೋದೂ, ಆಮೇಲೆ ನಾನು ಕೂಡ ಮರೆಯೋದೂ ಬೇಡ, ಖಾಯಂ ಆಗಿ ಇದು share ಆಗ್ತಾ ಇರಬೇಕು ಅಂತ ಇದನ್ನ ಇಲ್ಲಿ ಹಾಕ್ತಾಇದೀನಿ. ನಿಮಗೂ ಇದು ಇಷ್ಟ ಅಗೇ ಆಗುತ್ತೆ ಅಂತ ನನಗೇ ೧೦೦% ಭರವಸೆ ಇದೆ. ಇದನ್ನ ನಿಮ್ಮ ಗೆಳೆಯ ಗೆಳತಿಯರಿಗೂ ಕೇಳಿಸಿ  ಅವರೂ ಕೇಳಿ ಒಂದು ಕ್ಷಣ ಖುಷಿ ಪಡಲಿ.          

ಶಂಕರ್ ನಾಗ್ ಅವರ ಒಂದು ನೆನಪಿನಲ್ಲಿ ಅವರ ಮಾತುಗಳು ಅವರ ಧ್ವನಿಯಲ್ಲೇ ಕೇಳಿ.......

ಕೊನೆಗೊಂದು ಮಾತು ಈ techonology ಗಳು ನಮಗೆ ಎಷ್ಟು ಸಹಾಯ ಮಾಡಿವೆ!! ಅದು ಇಲ್ಲದ ಇದ್ರೆ ಮೊದಲು ನಾನು ಈ ಮಾತುಗಳು ಕೇಳ್ತಾ  ಇರಲಿಲ್ಲ, ಇಂದು ಇದನ್ನ ನಿಮಗೂ ಹೇಳೋಕೆ ಆಗ್ತಾ ಇರಲಿಲ್ಲ...

Interview part 1



Interview Part 2



Interview Part 3

Thursday, November 11, 2010

ಮುನ್ನುಡಿ

ಈಗಾಗಲೇ ಒಂದು ಕಡೆ ಬರಿತಿದಿನಿ ಮತ್ತೆ ಇನ್ನೊಂದು ಕಡೆ ಯಾಕೆ?

ಅದು ನನ್ನ ಮನೆ; ಇಲ್ಲಿ ಬರೆಯುವುದು ಸುಮ್ಮನೆ.

ಅಲ್ಲಿ ಎಲ್ಲರೂ ಬರಬಹುದು, ಬಂದು ಓದಬಹುದು. ಆದರೆ ಇಲ್ಲಿ ಎಲ್ಲರೂ ಬರಲ್ಲ, ಬಂದರೂ ಎಲ್ಲರೂ ಓದಲ್ಲ, ಇನ್ನು ಕೆಲವರಿಗೆ ಓದಬೇಕೆಂದರೂ ಓದಲಿಕ್ಕೆ ಬರಲ್ಲ. ಅದಕ್ಕೆ ಅದು ಅಲ್ಲಿ; ಇದು ಇಲ್ಲಿ.
ಏನಂತೀರಿ?

ಜೀವನದಲ್ಲಿ ನಾವು ಭೇಟಿ ಆಗುವ ಜನ ಹಲವಾರು. ಈವರೆಗಿನಿನ ಪ್ರಯಾಣದಲ್ಲಿ ಒಮ್ಮೆ ಹಾಗೆ ಹಿಂದುರಿಗಿ ನೋಡಿ!!

ಅಲ್ಲೆಲ್ಲ ತಮಾಷೆ, ನಗು, ಗೆಳೆಯರು, ಗೆಳೆತಿಯರು, ಓದು, ಸ್ಕೂಲು, ಕಾಲೇಜು, picnics, trips, ಪ್ರೀತಿ-ಪ್ರೇಮ, ಆ ಸಂತೋಷ- ದುಖ...
ಇದೆಲ್ಲವನ್ನು ದಾಟಿ ನಾವೆಲ್ಲರೂ ಈಗ corporate world ಗೆ   ಮುಂದೆ ಸಾಗಿ ಬಂದಿದ್ದೇವೆ. ಇದೆಲ್ಲವನ್ನು ಹೊರತು ನಾನಲ್ಲ, ನೀವೂ ಅಲ್ಲ ಬಿಡಿ. ಯಾಕಂದ್ರೆ ನಾವು-ನೀವು ಮನುಷ್ಯರಲ್ಲವೇ?

ಏನೋ ದೊಡ್ಡದಾಗಿ ಪೀಟಿಕೆ ಹಾಕ್ತಾ ಇದಾನೆ ಅಂತ ಅನ್ಕೊಬೇದ್ರಿ. Start ಮಾಡೋಕಿಂತ ಮೊದಲು ಸ್ವಲ್ಪ flashback ಇದ್ರೆ ಚೆನ್ನಗಿತ್ತಲ್ವಾ?

ಹಾಗೇ ಕೆಲವೊಮ್ಮೆ ಏನೋ ಮಾಡ್ತಾ ಇರುವಾಗ ಈ ಮನಸ್ಸಿಗೆ ಎಲ್ಲೆಲ್ಲೋ ತಿರುಗೋಕೆ ಹೋಗೋ ಹಳೆ  ಚಾಳಿ. (ಇವನಿಗೆ ಮಾಡೋಕೇನೂ ಕೆಲಸ ಇರಲ್ವಾ ಅಂತ ನಿಮ್ಮ ತೆಲೆಲಿ ಈಗ ಬಂದ್ರೆ ಅದು ನನ್ನ ತಪ್ಪಲ್ಲ ಬಿಡಿ). ಏನ್ ಮಾಡೋದು ಅದರ default setting ಹಾಗೇ ಇದೆ? ಹಾಗೇ ಕೆಲವೊಮ್ಮೆ ಹಿಂದೆ ಸ್ವಲ್ಪ rewind  ರಾಗದಲ್ಲಿ ಹೋದಾಗ ಎಲ್ಲರೂ, ಎಲ್ಲಾನೂ ಹಿತವಾಗಿರುತ್ತೆ. ಅದು ಒಂದು ವ್ಯಕ್ತಿ ಆಗಿರಬಹುದು, ಘಟನೆ ಇರಬಹುದು, ಕಾಡುವ ಕಹಿ ನೆನೆಪಿರಬಹುದು, ಪ್ರವಾಸ ಮಾಡಿದ ಒಂದು ಊರು ಇರಬಹುದು, ಗೆಳೆಯರು ಕೂತು ನಕ್ಕು ಸಮಯ ಕಳೆದ ಜಾಗವಿರಬಹುದು, ಒಳ್ಳೆಯ ಸ್ನೇಹಿತನ ಥರ pose ಹೊಡೆದು ಈಗ  address ಗೇ ಇರದ ಆ ಅಸಾಮಿ ಇರಬಹುದು, ನಿನ್ನಂಥ ಫ್ರೆಂಡ್ ನಾನು ಇಲ್ಲಿವರೆಗೂ ಭೇಟಿ ಆಗೇಇಲ್ಲ ಲೇ  ಅಂತ ಒಂದು  ಸಂಜೆ ಹೇಳಿದ ಆ ಗೆಳೆಯನ ನೆನಪಿರಬಹುದು, ಸುಮ್ಸುಮ್ನೆ ರಾತ್ರಿ ಎಲ್ಲ ಗೆಳೆಯರ ಜೊತೆ ಊರು ಸುತ್ತಿದ ನೆನಪಿರಬಹುದು, ವಿನಾಕಾರಣ ನಾನು ಕಣ್ಣೇರು ಹಾಕಿಸಿದ ಆ ಹುಡುಗಿ ಇರಬಹುದು, ಅವಳಿಗೊಂದು ಕ್ಷಮೆ ಕೇಳಲೆಂದು ಕಣ್ಣು ಅವಳನ್ನೇ ಹುಡುಕಿದ ಆ ದಿನಗಳು!! ಮೊದಲ ಸಾರಿ ಕೆಲಸಕ್ಕೆ ಸೇರಿದಾಗ ಪಟ್ಟ ಕಷ್ಟಗಳು, ಅವಮಾನಗಳು, ದುಡ್ಡು ಕಡಿಮೆ ಇದ್ದಾಗೆಲ್ಲ by-two ಟೀ ಕುಡಿತಿದ್ದ ಆ ದರ್ಶಿನಿ ಇರಬಹುದು, sudden ಆಗಿ ನಮ್ಮೆಲ್ಲರ ಚಡ್ಡಿ ದೋಸ್ತ್ ರತ್ನಾಕರ್  accident ಅಲ್ಲಿ ಮರಣ ಹೊಂದಿದ ಆ ದಿನದ ನೆನಪು, ಕೆಲವೊಮ್ಮೆ ವಯಸ್ಸಾದವರನ್ನ ನೋಡಿದಾಗ  ಈ ಎರೆಡು ತಿಂಗಳ ಹಿಂದೆ ತೀರಿಕೊಂಡ ನನ್ನ ಪ್ರೀತಿಯ ಅಜ್ಜನ ನೆನಪಾಗಿ ಕಣ್ಣಲ್ಲಿ ನೀರು ತುಂಬಿ ಬರೋದು.... ಇವೆಲ್ಲ ಕೆಲವೊಂದು ಸರ್ತಿ ನಾನು ಎಲ್ಲೇ ಇದ್ದರೂ - ನನಗೇ ಮುನ್ಸೂಚನೆ ಇಲ್ಲದೆ full fast ಆಗಿ rewind ಆಗಿರುತ್ತವೆ. ಯಾಕೆ ಅಂತ ಕೇಳಿದ್ರೆ ಉತ್ತರ - ಹಾಗೆ ಸುಮ್ಮನೆ!!!

ಕೆಲವೊಮ್ಮೆ ಇಷ್ಟೆಲ್ಲಾ ಹೇಗೆ ಕರಾರುವಕ್ಕಾಗಿ ನೆನಪಾಗುತ್ತಲ್ಲ ಅಂತ ನನಗೇ shock ಆಗುತ್ತೆ. ಈ ನೆನಪುಗಳು ಎಲ್ಲಿ ಇದ್ದವು, ಎಲ್ಲಿಂದ ಬಂದವು ಅಂದರೆ - ನನ್ನ ಮನದಂಗಳದಿಂದ, ನನ್ನ ನೆನಪಿನಗಳದಿಂದ !!

ನನಗೆ ತುಂಬಾನೇ ಹತ್ತಿರ ವಾದವುಗಳು ಪೋಣಿಸಿ ಬರೆದಿಡುವ ಜಗವೇ  ಈ http://nannanenapinangaladinda.blogspot.com/.
ವಿಶೇಷವಾಗಿ ನನ್ನ ಕವನಗಳು, ಹನಿಗವನಗಳು ಇಲ್ಲಿ ಆಗಾಗ ಬಂದು ಹೋಗುತ್ತವೆ. ಹೆಚ್ಚು ಕಡಿಮೆ 1997 ದಿಂದ ನಾನು ಅವನ್ನ ಬರೆದಿದ್ದೀನಿ. ಧಾರವಾಡ ಅನ್ನೋ ಊರೇ ಹಾಗೇ, ಅಲ್ಲೇ ಈ ಬರೆಯೋ ಚಾಳಿ ಶುರುಅಗಿದ್ದು. ಒಂದು  ಕಾಲ ಇತ್ತು  ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲು ಹೊಡೆದರೂ ಅದು ಒಬ್ಬ ಸಾಹಿತಿ ಮನೆ ಮೇಲೆ ಬೀಳುತ್ತೆ ಅಂತ ಮೊದಲೆಲ್ಲ ಮಾತಾಡ್ತಿದ್ರು (ಇವತ್ತು ಧಾರವಾಡದಲ್ಲಿ ಎಲ್ಲಿ ನಿಂತು  ಕಲ್ಲು ಹೊಡೆದರೂ ಅದು ಒಂದು tution class ಮೇಲೆ ಬಿಳುತ್ತೆ). ನಾನು ಸಾಹಿತಿ ಅಂತೂ ಅಲ್ಲ ಅದ್ರುನು ಆ ಧಾರವಾಡದಲ್ಲಿ ಅದೇನೂ ಇದೆ - ನಮಗೆಲ್ಲ ಬರೆಯವುದನ್ನು ಕಲಿಸುತ್ತೆ. (ಅದೇ PUC exam ಅಲ್ಲಿ ಹೀಗೆ ಚೆನ್ನಾಗಿ ಬರಯೋದನ್ನ ಕಲಿಸಿದರೆ ಇವತ್ತು ಎಲ್ಲೋ ಇರ್ತಿದ್ದೆ ಬಿಡಿ)  ಆಗೋದೆಲ್ಲ ಒಳ್ಳೇದಕ್ಕೆ ಅಂತ ಹೇಳ್ತಾರೆ!!

ಈ 4-5 ವರ್ಷಗಳಲ್ಲಿ ಈ ಕವನಗಳೆಲ್ಲ  ಬರೆದಿದ್ದು ತುಂಬಾನೇ ಕಡಿಮೆ  ನಾನು ಬರೆದಿರುದನ್ನೆಲ್ಲ  ಓದಿ ನೀವು ಶಾಕ್ ಅಗ್ತಿರೂ, surprise ಅಗ್ತೀರೂ ಗೊತ್ತಿಲ್ಲ, ಆದ್ರೆ ನನಗೆ ಮಾತ್ರ ಇವನ್ನೆಲ್ಲ ನಿಮ್ಮ ಮುಂದೆ ಇಡೋಕೆ ಸಿಕ್ಕಾಪಟ್ಟೆ ಮುಜುಗರ ಭಯ ಆಗ್ತಿದೆ!!!

ಅದ್ರೂನು ಸ್ವಲ್ಪ ಧೈರ್ಯ ತಗೊಂಡಿದೀನಿ.

ನಿಮಗೆಲ್ಲ ಸ್ವಾಗತ ಸುಸ್ವಾಗತ!!

ಕೊನೆದಾಗಿ ಈ ಕಂಪ್ಯೂಟರ್ ನಲ್ಲಿ ಅದೂ  ಕನ್ನಡದಲ್ಲಿ ಬರೆಯೋ ಸಾಫ್ಟ್ವೇರ್ ಕಂಡು ಹಿಡಿದ ಆ ಎಲ್ಲ ಪುಣ್ಯಾತ್ಮರಿಗೆ -ಪುಣ್ಯತಗಿತ್ತಿಯರಿಗೆ ನನ್ನ ಹೃದಯ ತುಂಬಿದ ಧನ್ಯವಾದಗಳು, ಯಾಕಂದ್ರೆ ನನ್ನ hand writing ಮೊದಲೇ ಸಿಕ್ಕ ಪಟ್ಟೆ ಖಾರಬು ಅದರಲ್ಲಿ ಕನ್ನಡವಂತೂ ಕಾಗೆ ಕಾಲು ಗುಬ್ಬೆ ಕಾಲು ಅಂತ ಚಿಕ್ಕವನಿದ್ದಾಗಿಂದ ಇನ್ನುವರೆಗೆ consistant ಆಗಿ compliment ಪಡೆದಿದ್ದೇನೆ!! ನಿಮಗೆ ಆ ಚಿಂತೆ ಇರಲ್ಲ :)
  
ನಾನು ಬರೆದಿರುವ postಗಳು ನಿಮಗೆ ಇಷ್ಟವಾದಲ್ಲಿ post ಕೆಳಗೆ ಇರುವ facebook "like" ಪ್ರೆಸ್ ಮಾಡಿ. ಅದು ನನಗೂ "like" ಆಗುತ್ತೆ!!
ನಿಮ್ಮಗ ಫ್ರೆಂಡ್ಸ್ ಇದನ್ನ ಓದಬೇಕು ಅಂತ ನಿಮಗೆ ಅನಿಸಿದರೆ "share on facebook" click ಮಾಡಿ share ಮಾಡಿ.
ನಾನು ಬರೆಯುವ ಹೊಸ  post ಗಳು ನಿಮಗೆ ಗೊತ್ತಾಗಬೇಕಿದ್ರೆ "follow" click ಮಾಡಿ. ಏನೇ ಮಾಡಿ ಬಿಡಿ ಆದರೆ ನಿಮ್ಮ comments ಮಾತ್ರ ಬರೆಯೋದನ್ನ ಮಾತ್ರ ಬಿಡಬೇಡಿ.