Written on 29/01/1999
ವಸಂತ ಋತು
ಬಂದಿದೆ, ಮತ್ತೆ ಬಂದಿದೆ
ವಸಂತ ಋತು ಮತ್ತೆ ಬಂದಿದೆ.
ಯುಗ ಯುಗ ಕಳೆದರೂ ಯುಗಾದಿ ಬರುವಂತೆ
ಋತು ಋತು ಉರುಳಿದರೂ ಮತ್ತೆ ವಸಂತ ಋತು ಬಂದಿದೆ.
ಅಳುಮುಂಜಿಯಂತೆ ಮುಖ ಮಾಡಿದ್ದ ಎಲೆಗಳೆಲ್ಲ
ಈ ಋತುವಿನಲ್ಲಿ ಹೊಸ ಉಲ್ಲಸವ ತೋರುತಿವೆ.
ಬಂಜೆಯಂತಿದ್ದ ಗಿಡ ಮರಗಳೆಲ್ಲ ಹಣ್ಣುಕಾಯಿ ಬಿಡಲು
ಹೂಬಿಟ್ಟು ಬಸುರಿಯಂತೆ ತಾಯ್ತನ ತೋರುತಿವೆ.
ಎಲ್ಲ ಋತುಗಳಲ್ಲಿ ತನ್ನ ಹಾಡನ್ನು ಅದುಮಿಟ್ಟ ಕೋಗಿಲೆ
ಇದೆ ಋತುವಿನಲ್ಲಿ ಸಹನೆಯೊಡೆದು "ಕುಹೂ ಕುಹೂ" ಎನ್ನುತಿದೆ.
ವಿರಹದ ಬೆಂಕಿಯಲಿ ಬೇಯುತಿರುವ ಪ್ರಿಯತಮೆ
ಈ ಋತುವಿನ ಮುಂಜಾವ ತಂಪಿನಲಿ ಇನಿಯನ ನೆನೆಯುತ
ಆತನ ಸೇರಲು ಕನವರಿಸುತಿಹಳು.
ಉಲ್ಲಾಸ, ಈ ಋತುವಿನಲ್ಲಿ ಎಲ್ಲೆಲ್ಲಿ ನೋಡಿದರೂ ನವೋಲ್ಲಾಸ
ಗಿಡಮರಗಳ ಹೂಎಲೆಗಳಲ್ಲಿ,
ಕೋಗಿಲೆಯ ಹಾಡಲ್ಲಿ,
ಪ್ರೇಮಿಗಳ ಮಿಲನದಲ್ಲಿ..... ನವೋಲ್ಲಾಸ.
ನೋಡಿದಲ್ಲೆಲ್ಲ ಉಲ್ಲಾಸ
ಕೆಳಿದಲ್ಲೆಲ್ಲ ಒಂದಾದ ಸಂಕೇತವೆಂಬಂತೆ ಋತುಗನಗಳು!!!
ನಿಮ್ಮ
ರವಿ

No comments:
Post a Comment